ವಿವಿಧೆಡೆ ಬಸವೇಶ್ವರ ಆರಾಧನೆ, ಎತ್ತುಗಳಿಗೂ ಪೂಜೆದಾವಣಗೆರೆ ನಗರದ ವಿವಿಧೆಡೆ ಶುಕ್ರವಾರ ಬಸವ ಜಯಂತಿಯನ್ನು ಶ್ರದ್ಧಾ- ಭಕ್ತಿಯಿಂದ ಆಚರಿಸಲಾಯಿತು. ಮುಂಜಾನೆಯಿಂದಲೇ ಜನರು ಬಸವೇಶ್ವರ ದೇವಸ್ಥಾನಗಳಿಗೆ ತೆರಳಿ ಭಕ್ತಿ ಸಮರ್ಪಿಸಿದರೆ, ಕೆಲವರು ಎತ್ತುಗಳಿಗೆ ಅಲಂಕಾರ ಮಾಡಿ, ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದರು. ಕೆಲವು ದೇವಸ್ಥಾನಗಳಲ್ಲಿ ತೊಟ್ಟಿಲು ಪೂಜೆ ಸಹ ನಡೆಸಲಾಯಿತು.