ಜಿಲ್ಲೆಯಲ್ಲಿ 63 ವಿಶೇಷ ಮತಗಟ್ಟೆಗಳ ಸ್ಥಾಪನೆ- ಜಿಲ್ಲಾಧಿಕಾರಿದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಚುನಾವಣೆ ನಡೆಯುತ್ತಿದ್ದು, ಜಿಲ್ಲೆಯಲ್ಲಿನ ಎಲ್ಲ ಮತಗಟ್ಟೆಗಳಲ್ಲಿ ಮತದಾರರಿಗೆ ಅಗತ್ಯವಿರುವ ಎಲ್ಲ ಮೂಲಸೌಲಭ್ಯಗಳನ್ನ ಕಲ್ಪಿಸಿ 7 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 5ರಂತೆ 35 ಸಖಿ ಮತಗಟ್ಟೆಗಳು, ತಲಾ 1 ರಂತೆ 7 ಯುವ ನಿರ್ವಹಣೆ ಮತಗಟ್ಟೆಗಳು, ತಲಾ 1ರಂತೆ 7 ಸಾಂಪ್ರದಾಯಿಕ ಮತಗಟ್ಟೆಗಳು, ತಲಾ 1 ರಂತೆ 7 ಧೈಯ ಆಧಾರಿತ ಮತಗಟ್ಟೆಗಳು ಹಾಗೂ ತಲಾ 1 ರಂತೆ 7 ವಿಶೇಷ ಚೇತನ ಮತಗಟ್ಟೆಗಳು ಸೇರಿ 63 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಿ ವಿಶೇಷವಾಗಿ ಅಲಂಕರಿಸಿ ಮತದಾರರನ್ನು ಕೈಬೀಸಿ ಕರೆಯುವಂತೆ ಸಿಂಗರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ತಿಳಿಸಿದ್ದಾರೆ.