ವಾರದ ಸಂತೆಯಲ್ಲಿ ಗಾಯತ್ರಿ ಸಿದ್ದೇಶ್ವರ ಬಿರುಸಿನ ಮತಯಾಚನೆವಾರದ ಸಂತೆ ದಿನವಾದ ಭಾನುವಾರ ದಾವಣಗೆರೆ ಹಳೆ ಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪಕ್ಷದ ಹಿರಿ-ಕಿರಿಯ ಮುಖಂಡರು, ಕಾರ್ಯಕರ್ತರ ಸಮೇತ ಬೆಳ್ಳಂಬೆಳಗ್ಗೆಯೇ ಬಿರುಸಿನ ಪ್ರಚಾರ ಕೈಗೊಂಡಿದ್ದಷ್ಟೇ ಅಲ್ಲ, ದ್ರಾಕ್ಷಿ ಹಣ್ಣು, ತರಕಾರಿ ಖರೀದಿಸುವ ಮೂಲಕ ಬೀದಿ ಬದಿ ವ್ಯಾಪಾರಸ್ಥರು, ಸಂತೆಗೆ ಬಂದ ಬಡ ಮಹಿಳೆಯರು, ವಿಕಲಚೇತನರು, ಹಿರಿಯ ನಾಗರೀಕರ ಅಹವಾಲು ಸಹ ಆಲಿಸಿದರು.