ಮಳೆಯಿಂದ ಹೆಸರು ಬೆಳೆ ಇಳುವರಿ ಕುಂಠಿತಮುಂಗಾರಿನಲ್ಲಿ ರೈತರು ಅಧಿಕ ಪ್ರಮಾಣದಲ್ಲಿ ಹೆಸರು ಬೆಳೆ ಬಿತ್ತಿದ್ದರು. ಬೀಜ, ಗೊಬ್ಬರ, ಔಷಧಿ ಸೇರಿ ಒಂದು ಎಕರೆಗೆ ರೈತರು ₹20 ಸಾವಿರದಿಂದ ₹25 ಸಾವಿರ ಖರ್ಚು ಮಾಡಿದ್ದಾರೆ. ಈ ಹಿಂದೆ ಎಕರೆಗೆ ನಾಲ್ಕೈದು ಕ್ವಿಂಟಲ್ ಹೆಸರು ಬೆಳೆ ಬರುತ್ತಿತ್ತು. ಆದರೆ, ಈ ಬಾರಿ ಮಳೆಯಿಂದ ಬೆಳೆ ಹಾಳಾಗಿ ಕ್ವಿಂಟಲ್‌ನಷ್ಟೂ ಹೆಸರು ಕೈ ಸೇರಿಲ್ಲ.