ಸೆ. 13 ರಿಂದ ನಾಲ್ಕು ದಿನಗಳ ಕಾಲ ರೈತರ ಜಾತ್ರೆಕೃಷಿಯ ಆಧುನಿಕ ತಂತ್ರಜ್ಞಾನಗಳು, ಅನ್ವೇಷಣೆಗಳು ಮತ್ತು ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದೇ ಮೇಳದ ಉದ್ದೇಶ. ಮೇಳದಲ್ಲಿ 20 ಲಕ್ಷಕ್ಕೂ ಹೆಚ್ಚು ರೈತರು ಭಾಗವಹಿಸುವ ನಿರೀಕ್ಷೆ ಇದ್ದು, ಮುಖ್ಯ ವೇದಿಕೆ ಹಾಗೂ ರೈತರ ಜ್ಞಾನಾಭಿವೃದ್ಧಿ ಕೇಂದ್ರಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.