ಮುಂಗಾರು ಬೆಳೆಗಳಿಗೆ ಬಸವನ ಹುಳುಗಳ ಬಾಧೆ!ಈ ಬಸವನಹುಳುಗಳನ್ನು ನಿಯಂತ್ರಿಸಬೇಕೆಂದರೆ ಕೀಟನಾಶಕ ಸಿಂಪಡಿಸಬೇಕು. ಆದರೆ, ಮಳೆ ನಿರಂತರವಾಗಿ ಬರುತ್ತಿದ್ದು, ಕೀಟನಾಶಕ ಸಿಂಪಡಿಸಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ರಾತ್ರಿ ಹೊತ್ತು ಬೆಳೆ ನಾಶ ಮಾಡಿ ಹಗಲೊತ್ತಿನಲ್ಲಿ ಮಣ್ಣಿನೊಳಗೆ ಹುದುಗಿರುವ ಬಸವನ ಹುಳುವನ್ನು ಕೂಲಿಯಾಳುಗಳೊಂದಿಗೆ ರೈತರು ಮಣ್ಣಿನಿಂದ ಹೊರ ತೆಗೆದು ನಾಶ ಮಾಡುವ ಸ್ಥಿತಿ ಬಂದಿದೆ.