ಅಯೋಧ್ಯೆಗೆ ಪಾದಯಾತ್ರೆ ಹೊರಟ ಹುಬ್ಬಳ್ಳಿ ಯುವಕಡಿ.22ರಂದು ಹುಬ್ಬಳ್ಳಿ ಸಿದ್ಧಾರೂಢ ಸ್ವಾಮಿ ದರ್ಶನ ಪಡೆದು ಮಠದಿಂದ ಈ ಯಾತ್ರೆ ಪ್ರಾರಂಭಿಸಿದರು. ಊಟ, ವಸತಿ ಬಗ್ಗೆ ಚಿಂತಿಸದೆ, ಕೈಯಲ್ಲಿ ಕರ್ನಾಟಕ ಧ್ವಜ ಹಿಡಿದು, ಕೊರಳಿನಲ್ಲಿ ಕೇಸರಿ ಬಣ್ಣದ ಶಾಲು ಹಾಕಿಕೊಂಡು ನಡೆದು ನಡೆದು ಪಾದಗಳಲ್ಲಿ ಬೊಬ್ಬೆ ಬಂದು, ಆರೋಗ್ಯದಲ್ಲಿ ಏರುಪೇರಾದರೂ ಶ್ರೀರಾಮ ಜಪ ಮಾಡುತ್ತ, ಅಲ್ಲಲ್ಲಿ ಮಠ-ಮಂದಿರಗಳಲ್ಲಿ ನೀಡುವ ಪ್ರಸಾದ ಸೇವಿಸುತ್ತ ದೃಢ ಮನಸ್ಸಿನಿಂದ ಮುನ್ನಡೆದಿದ್ದಾರೆ.