ಕಾಮ ಕ್ರೋಧಗಳ ತ್ಯಾಗವೇ ಸನ್ಯಾಸ ಯೋಗಮನುಷ್ಯ ತನ್ನ ಜೀವನದಲ್ಲಿ ತ್ಯಾಗ, ಕರ್ಮಯೋಗ ಎರಡನ್ನೂ ಹೊಂದಿಸಿಕೊಂಡು ಧ್ಯಾನದ ಪಥದಲ್ಲಿ ಶ್ರಮಿಸಿದಾಗ ಮಾತ್ರ ಅಧ್ಯಾತ್ಮಿಕ ಪರಮಾನಂದವನ್ನು ಹೊಂದಲು ಸಾಧ್ಯ. ಸನ್ಯಾಸ, ಕರ್ಮಯೋಗಗಳು ಒಂದಕ್ಕೊಂದು ವಿರುದ್ಧವಾಗಿರದೆ ಪರಸ್ಪರ ಸಹಕಾರಿಯಾಗಿದೆ. ರಾಗ ದ್ವೇಷಾದಿ ತ್ಯಾಗ ಮಾಡುವುದರಿಂದ ಮಾತ್ರ ನಾವು ತೃಪ್ತಿ ಹೊಂದದೆ, ನಿಷ್ಕಾಮ ಕರ್ಮಾಚರಣೆಯಿಂದ ಸಾಧನೆಗೆ ಪರಿಪೂರ್ಣತೆ ತಂದುಕೊಳ್ಳಬೇಕು