ಏಸುವಿನ ಆರಾಧನೆಗೆ ಹುಬ್ಬಳ್ಳಿ ಸನ್ನದ್ಧಡಿ. 25ರಂದು ಕ್ರಿಸ್ಮಸ್ ಹಬ್ಬ. ನಗರದ ಎಲ್ಲ ಚರ್ಚ್ಗಳಲ್ಲೂ ಈಗ ಹಬ್ಬದ ಸಂಭ್ರಮ ಮನೆಮಾಡಿದ್ದು, ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಕ್ರೈಸ್ತ್ ಸಮಾಜ ಬಾಂಧವರು ಚರ್ಚ್ಗಳಲ್ಲಿ ಸೇರಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಹಬ್ಬಕ್ಕೆ ಬೇಕಾದ ತಯಾರಿಯಲ್ಲಿ ತೊಡಗಿದ್ದು, ಕಳೆದ ಒಂದು ವಾರದಿಂದ ಚರ್ಚ್, ತಮ್ಮ ಮನೆಗಳನ್ನು ವಿದ್ಯುದ್ದೀಪದಿಂದ ಅಲಂಕರಿಸುವುದು, ಬಟ್ಟೆ, ಉಡುಗೊರೆಗಳ ಖರೀದಿ ಜೋರಾಗಿದೆ.