ತನು, ಮನಃ ಶುದ್ಧಿಗೆ ಇಷ್ಟಲಿಂಗ ಪೂಜೆ ಸಹಕಾರಿಗೋಕುಲ ರಸ್ತೆಯಲ್ಲಿರುವ ಬಸವ ಕೇಂದ್ರದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರು ಸಂಯೋಜಿಸಿದ ವಚನಶಾಸ್ತ್ರಸಾರ ಶತಮಾನೋತ್ಸವ - ಷಟ್ಸ್ಥಲ ವಚನ ಪ್ರವಚನ ಸೋಮವಾರ ಮಂಗಲವಾಯಿತು. ಈ ವೇಳೆ ಗದಗ ತೋಂಟದಾರ್ಯ ಮಠದ ಡಾ. ಸಿದ್ಧರಾಮ ಶ್ರೀಗಳು ಆಶೀರ್ವಚನ ನೀಡಿ, ನಮ್ಮ ತನು, ಮನಃ, ಭಾವ ಶುದ್ಧಿಗೆ ಇಷ್ಟಲಿಂಗ ಪೂಜೆ ಸಹಕಾರಿಯಾಗಿದೆ ಎಂದು ಹೇಳಿದರು.