ಪ್ರತಿ ವ್ಯಕ್ತಿಯಲ್ಲೂ ಮನುಷ್ಯತ್ವ ಇರಲಿಗೋಕಾಕ ಚಳವಳಿ ಸಂದರ್ಭ ನನ್ನ ಹಾಗೂ ಚಂದ್ರಕಾಂತ ಬೆಲ್ಲದ ಅವರ ಪರಿಚಯವಾಗಿದ್ದು, ಆವತ್ತಿನಿಂದ ಮನುಷ್ಯ ಸಂಬಂಧ ಬೆಳೆದಿದೆ. ಬಸವಣ್ಣನವರ ತತ್ವ, ಆದರ್ಶಗಳಲ್ಲಿ ಅಪಾರ ನಂಬಿಕೆ ಇಟ್ಟುಕೊಂಡು ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಚಂದ್ರಕಾಂತ ಅವರು ಬಸವತತ್ವದ ಪ್ರತಿಪಾದಕರು. ನಾನು ಕೂಡ ಬಸವಣ್ಣನವರ ಅನುಯಾಯಿ. ಆಗಿನಿಂದಲೂ ಚಂದ್ರಕಾಂತ ನನ್ನ ಬಗ್ಗೆ ಅಪಾರ ಪ್ರೀತಿ, ಗೌರವ ತೋರಿಸುತ್ತಾರೆ.