ದೇಶಿಯ ವಸ್ತುಗಳ ಖರೀದಿಗೆ ಮುಂದಾದ ಜನತೆಈ ಬಾರಿ ಜನತೆ ಸ್ಥಳೀಯವಾಗಿ ತಯಾರಾಗುವ ವಸ್ತುಗಳಿಗೆ ಹೆಚ್ಚಾಗಿ ಮೊರೆ ಹೋಗಿದ್ದಾರೆ. ಪ್ರತಿಬಾರಿ ಜನ ಹಣತೆ, ಆಕಾಶಬುಟ್ಟಿ, ಬಗೆಬಗೆಯ ಲೈಟಿನ ಸರಗಳು, ಪಿಂಗಾಣಿ ವಸ್ತುಗಳು ಸೇರಿದಂತೆ ಗೃಹಪಯೋಗಿ ವಸ್ತುಗಳಿಗಾಗಿ ಚೀನಾ ವಸ್ತುಗಳ ಮೊರೆ ಹೋಗುತ್ತಿದ್ದರು. ಆದರೆ, ಈ ಬಾರಿ ಸ್ಥಳೀಯವಾಗಿ ಉತ್ಪಾದನೆಯಾಗುವ, ಮೇಡ್ ಇನ್ ಇಂಡಿಯಾ ವಸ್ತುಗಳನ್ನೇ ಕೇಳಿ ಪಡೆಯುತ್ತಿದ್ದಾರೆ. ಚೀನಾ ವಸ್ತುಗಳು ಇಲ್ಲಿನ ವಸ್ತುಗಳಿಗಿಂತ ಕೊಂಚ ಕಡಿಮೆ ಬೆಲೆಯಲ್ಲಿರುತ್ತವೆ.