ಕಡಲೆ, ಮಾವು ಬೆಳೆಗೆ ಚಳಿಯ ಕೊರತೆ!ಬರೀ ಚಳಿಯ ಆಧಾರದ ಮೇಲೆ ಹಿಂಗಾರು ಬೆಳೆಗಳು ಬೆಳೆಯುತ್ತವೆ ಎಂದು ನಂಬಿ ಬಿತ್ತನೆ ಮಾಡಿದ ರೈತನಿಗೆ ಇದೀಗ ಚಳಿಗಾಲವು ಕೈ ಕೊಡಲಿದೆಯೇ ಎನ್ನುವ ಆತಂಕ ಶುರುವಾಗಿದೆ. ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ರೈತರು ಹಿಂಗಾರು ಬೆಳೆಗಳನ್ನು ತುಸು ಬೇಗನೆ ಬಿತ್ತಿದರು. ಜೊತೆಗೆ ಬಿತ್ತನೆ ಸಮಯದಲ್ಲೂ ಉಂಟಾದ ಮಳೆ ಕೊರತೆಯನ್ನು ಕಷ್ಟಪಟ್ಟು ಕೊಳವೆ ಬಾವಿ ಮತ್ತು ಹಳ್ಳಗಳಿಂದ ನೀಗಿಸಿದರು. ಇದೀಗ ನವೆಂಬರ್ ಅಂತ್ಯ ಬಂದರೂ ಒಂಚೂರು ಚಳಿಯ ಸದ್ದಿಲ್ಲ.