2025ರ ವೇಳೆಗೆ ದೇಶದ 15 ಕೋಟಿ ಜನರಿಗೆ ಕ್ಯಾನ್ಸರ್ ಸಂಭವಕನ್ನಡಪ್ರಭ ವಾರ್ತೆ ಧಾರವಾಡನಿತ್ಯ ನಾವು ಸೇವಿಸುವ ಆಹಾರ ಅಮೃತಕ್ಕೆ ಸಮಾನ. ಉತ್ತಮ ಆಹಾರದ ಎದುರು ಎಂತಹ ಔಷಧಿಯೂ ಇಲ್ಲ ಎಂದು ಪಾರಂಪರಿಕ ವೈದ್ಯ ಹನುಮಂತ ಮಳಲಿ ಹೇಳಿದರು.ಇಲ್ಲಿಯ ಸರ್ಕಾರಿ ನೌಕರರ ಭವನದಲ್ಲಿ ಸ್ವದೇಶಿ ಹೋರಾಟಗಾರ ರಾಜೀವ ದೀಕ್ಷಿತ್ ವಿಚಾರ ವೇದಿಕೆ ಗುರುವಾರ ಆಯೋಜಿಸಿದ್ದ ರಾಜೀವ ದೀಕ್ಷಿತ ಜಯಂತಿ ಹಾಗೂ ಪಾರಂಪರಿಕ ಔಷಧಿಗಳ ಶಕ್ತಿ ಮತ್ತು ಚಿಕಿತ್ಸೆ ಕುರಿತು ಉಪನ್ಯಾಸ ನೀಡಿದ ಅವರು, ನಮ್ಮ ದೇಹಕ್ಕೆ ಆಹಾರವೇ ಪರಮ ಔಷಧಿ. ಆದರೆ, ಈ ಬಗ್ಗೆ ಹೆಚ್ಚಿನವರಿಗೆ ತಿಳಿವಳಿಕೆ ಇಲ್ಲದೇ ಇಂಗ್ಲೀಷ್ ಔಷಧಿಗೆ ಮಾರು ಹೋಗಿದ್ದೇವೆ. ದೇಶದಲ್ಲಿ 21 ಲಕ್ಷ ವನಸ್ಪತಿಗಳಿವೆ. ಪ್ರತಿಯೊಂದರಲ್ಲೂ ಒಂದೊಂದು ಔಷಧಿ ಇದೆ. ವನಸ್ಪತಿಯಲ್ಲಿನ ಔಷಧಿ ಗುಣ ಗುರುತಿಸುವವರು ವಿರಳ ಎಂದರು.