ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧಗೊಂಡ ಗಾಜಿನಮನೆಇಂದಿರಾ ಗಾಜಿನ ಮನೆ ನವ ವಧುವಿನಂತೆ ಶೃಂಗಾರಗೊಂಡಿದೆ. ಎಲ್ಲೆಲ್ಲೂ ಫಲಪುಷ್ಪಗಳ ರಾಶಿ, ಬಗೆಬಗೆಯ ತರಕಾರಿಗಳು, ಸಿರಿಧಾನ್ಯಗಳ ರಾಶಿಯೇ ಕಂಡುಬರುತ್ತಿದೆ. ಈ ವರ್ಷದ ಪ್ರಮುಖ ಆಕರ್ಷಣೆಯೇ ಬಗೆಬಗೆಯ ಪುಷ್ಪಗಳಿಂದ ತಯಾರಿಸಲಾಗಿರುವ 12 ಅಡಿ ಎತ್ತರದ ಚಂದ್ರಯಾನ-3, ಅಂಬಾರಿ ಹೊತ್ತ ಅರ್ಜುನ ಆನೆ, ಸಿರಿಧಾನ್ಯಗಳಲ್ಲಿ ಅರಳಿದ ಬಸವೇಶ್ವರರು, ಶಾವಿಗೆಯಲ್ಲಿ ತಯಾರಿಸಲಾದ ಸಿದ್ದೇಶ್ವರ ಶ್ರೀಗಳ ಮೂರ್ತಿ