ನಗರಸಭೆ ಚುನಾವಣೆ: ಡಿಸಿ, ಎಸಿ, ಪೌರಾಯುಕ್ತರಿಗೆ ನ್ಯಾಯಾಂಗ ನಿಂದನೆ ಸಂಕಷ್ಟ?ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಮುಂದೂಡುವಂತೆ ಫೆ. 28ರಂದು ಹೈಕೋರ್ಟ್ ನೀಡಿದ್ದ ಆದೇಶದ ನಡುವೆಯೂ ಚುನಾವಣೆ ಜರುಗಿಸಿ, ಧಾರವಾಡ ಉಚ್ಚ ನ್ಯಾಯಾಲಯದ ತೀರ್ಪನ್ನು ಪಾಲನೆ ಮಾಡದ ಹಿನ್ನೆಲೆಯಲ್ಲಿ ಮಾ. 5ರಂದು ವಿಚಾರಣೆ ನಡೆಸಿದ ನ್ಯಾಯಾಲಯ ಅಧಿಕಾರಿಗಳಿಗೆ ವಿವರಣೆ ಕೇಳಿ ನೋಟಿಸ್ ನೀಡಿದ್ದು, ಅಧಿಕಾರಿಗಳ ನ್ಯಾಯಾಂಗ ನಿಂದನೆಯ ಸಂಕಟ ಎದುರಾಗುವ ಸಾಧ್ಯತೆಗಳಿವೆ.