ಕಿಸಾನ ಸಮ್ಮಾನ ಯೋಜನೆ ಸಂಕಷ್ಟದಲ್ಲಿ ರೈತರ ಕೈ ಹಿಡಿದಿದೆನರಗುಂದ ತಾಲೂಕಿನ ಬೆನಕನಕೊಪ್ಪಗ್ರಾಮದಲ್ಲಿ ಎಸ್.ಬಿ.ಐ, ಇಂಡಿಯನ್ ಓವರಸಿಸ್ ಬ್ಯಾಂಕ್, ಹಾಗೂ ಇತರರ ಸಹಯೋಗದಲ್ಲಿ ವಿಕಸಿತ್ ಭಾರತ ಸಂಕಲ್ಪ ಯಾತ್ರೆಯ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಮಾತನಾಡಿದ ಶಾಸಕ ಸಿ.ಸಿ. ಪಾಟೀಲರು, ಬೆಳೆಗೆ ಹಾನಿಯಾದಾಗ ಕಿಸಾನ ಸಮ್ಮಾನ ಯೋಜನೆ ರೈತರ ಸಂಕಷ್ಟದಲ್ಲಿ ಕೈ ಹಿಡಿದಿದೆ. ಹೀಗೆ ಪ್ರಧಾನಿ ಮೋದಿ ಅವರ ಸಾಕಷ್ಟು ಯೋಜನೆಗಳು ಜನರ ನೆರವಿಗೆ ಬಂದಿವೆ. ದೇಶವನ್ನು ದಿವಾಳಿ ಅಂಚಿನಲ್ಲಿ ತಂದಿಡುವ ಬಿಟ್ಟಿಭಾಗ್ಯಗಳನ್ನು ನಂಬದೇ, ದೇಶವನ್ನು ಸುಭದ್ರವಾಗಿಡುವ ಪ್ರಧಾನಿ ಮೋದಿಯವರನ್ನು ಬೆಂಬಲಿಸೋಣ ಎಂದರು.