ಈರುಳ್ಳಿ ಬೆಲೆ ದಿಢೀರ್ ಕುಸಿತ, ರೈತರ ಕಣ್ಣಲ್ಲಿ ನೀರು!ಬರದ ಮಧ್ಯೆಯೂ ಈ ಬಾರಿ ಸಾವಿರಾರು ರುಪಾಯಿ ಖರ್ಚು ಮಾಡಿ ಈರುಳ್ಳಿ ಬೆಳೆದಿದ್ದ ಡಂಬಳ ರೈತರಿಗೆ ದಿಢೀರ್ ಬೆಲೆ ಕುಸಿತದಿಂದ ಬರಸಿಡಿಲು ಬಡಿದಂತಾಗಿದೆ. ಎರಡು ವಾರಗಳ ಹಿಂದೆ ₹4 ಸಾವಿರದಿಂದ ₹5 ಸಾವಿರದ ವರೆಗೆ ವ್ಯಾಪಾರವಾಗುತ್ತಿದ್ದ ಈರುಳ್ಳಿ ಬೆಲೆ ಕುಸಿತ ಕಂಡು ಮೊದಲನೆಯ ಹಂತದ ಮಾದರಿಯ ಈರುಳ್ಳಿಗೆ ₹1800, ಎರಡನೆಯ ಹಂತದ ಮಾದರಿಯ ಈರುಳ್ಳಿ ₹300ರಿಂದ 500ರ ವರೆಗೆ ಮಾರಾಟವಾಗುತ್ತಿದೆ.