ಪೆನ್‌ಡ್ರೈವ್ ಪ್ರಕರಣ: ದೇವರಾಜೇಗೌಡರ ಕಚೇರಿ ತಪಾಸಣೆಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ವಕೀಲ ದೇವರಾಜೇಗೌಡ ಬಳಸುತ್ತಿದ್ದ ಬಿಜೆಪಿ ಕಚೇರಿಗೆ ಮಂಗಳವಾರ ಸಂಸದ ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತಂಡದ ನಾಲ್ವರು ಸದಸ್ಯರು ಕಚೇರಿಯಲ್ಲಿ ಪರಿಶೀಲನೆ ನಡೆಸಿ, ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.