ಸಿಎಂ, ಡಿಸಿಎಂ ಕುರ್ಚಿ ಕಿತ್ತಾಟ ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದಲ್ಲ-ಬೊಮ್ಮಾಯಿರಾಜ್ಯ ಸರ್ಕಾರದಲ್ಲಿ ಬರಿ ಖುರ್ಚಿಯ ಕಚ್ಚಾಟ ನಡೆದಿದೆ. ಇಷ್ಟು ಅನುಭವ ಇರುವ ಸಿಎಂ, ಡಿಸಿಎಂ, ಮಂತ್ರಿಗಳಿದ್ದರೂ ಖುರ್ಚಿಗಾಗಿ ಕಿತ್ತಾಟ ಮಾಡುವುದು ಕರ್ನಾಟಕದ ಹಿತದೃಷ್ಟಿಯಿಂದ ಸರಿ ಅಲ್ಲ. ಈ ಸರ್ಕಾರದ ಚಟುವಟಿಕೆಯನ್ನು ಜನಸಾಮಾನ್ಯರು ಅತ್ಯಂತ ಬೇಸರದಿಂದ ನೋಡುತ್ತಿದ್ದಾರೆ ಎಂದು ಸಂಸದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.