ಕಸ ಸಂಗ್ರಹಣೆ ವಾಹನಕ್ಕೆ ಮಹಿಳೆ ಸಾರಥಿ!ಸ್ವಚ್ಛತಾ ವಾಹನ ಚಾಲಕರು ಮಹಿಳೆಯರು, ಕಸ ಸಂಗ್ರಹಿಸುವವರೂ ಮಹಿಳೆಯರೇ, ಗ್ರಾಮಗಳ ಸ್ವಚ್ಛತೆಗಾಗಿ ಸಾರ್ವಜನಿಕರಿಂದ ವಂತಿಗೆ ಸಂಗ್ರಹಿಸಿ ಅದರಲ್ಲಿಯೇ ಇವರ ಸಂಭಾವನೆ ಭರಿಸುವ ಯೋಜನೆ ಹಾನಗಲ್ಲ ತಾಲೂಕಿನ 42 ಗ್ರಾಮ ಪಂಚಾಯಿತಿಗಳಲ್ಲಿ ಚಾಲ್ತಿಯಲ್ಲಿದ್ದು, ಸ್ವಚ್ಛ ಗ್ರಾಮ ಯೋಜನೆಗೆ ಇದು ದೊಡ್ಡ ಹೆಜ್ಜೆಯಾಗಿದೆ.