ಮೋತಿತಲಾಬ್ ಕೆರೆ ಒಡ್ಡು ಒಡೆಯುವ ಆತಂಕ, ಪರಿಶೀಲನೆಸವಣೂರು ಪಟ್ಟಣದ ಅತಿದೊಡ್ಡ ಕೆರೆಯಾದ ಮೋತಿತಲಾಬ್ ಕೆರೆ ಒಡ್ಡು ಒಡೆಯುವ ಆತಂಕ ಉಂಟಾಗಿದೆ. ಕೆರೆಯ ಒಡ್ಡಿನಿಂದ ನೀರು ಜಿನುಗುತ್ತಿದೆ. ರೈತರು ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ, ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ, ಅಗತ್ಯ ಕ್ರಮ ಕೈಗೊಳ್ಳುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.