ಕೃಷಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ರೈತರಿಂದ ಪ್ರತಿಭಟನೆಕಂಪನಿಯೊಂದರ ಕಳಪೆ ಬಿತ್ತನೆ ಗೋವಿನ ಜೋಳದ ಬೀಜ ರೈತರ ಶ್ರಮವನ್ನು ಹಾಳು ಮಾಡಿದೆ. ಆರ್ಥಿಕ ಸಂಕಷ್ಟಕ್ಕೆ ನೂಕಿದೆ. ರೈತರಿಗೆ 6 ಕೆಜಿ ತೂಕ ಸಾಮರ್ಥ್ಯದ ಪಿವಿಸಿ ಪೈಪ್ ನೀಡುತ್ತಿಲ್ಲ, ರೈತರು ಆಯ್ಕೆ ಮಾಡಿಕೊಳ್ಳುವ ತುಂತುರು ನೀರಾವರಿ ಪೈಪ್ ಸೆಟ್ ವಿತರಿಸುತ್ತಿಲ್ಲ ಎಂದು ಕೃಷಿ ಇಲಾಖೆಗೆ ಮುತ್ತಿಗೆ ಹಾಕಿದ ರೈತ ಸಂಘ ಶೀಘ್ರ ಪರಿಹಾರ ಒದಗಿಸುವಂತೆ ಮನವಿ ಸಲ್ಲಿಸಿದೆ.