ಕಾಂಗ್ರೆಸ್‌ಗೆ ರೈತ ಸಮುದಾಯದ ಶಾಪ ತಟ್ಟಿದೆ: ಬಿ.ಸಿ. ಪಾಟೀಲ್ರಾಜ್ಯದ ರೈತ ಸಮುದಾಯದ ಶಾಪ ಕಾಂಗ್ರೆಸ್‌ಗೆ ತಟ್ಟಿದೆ. ಬರಗಾಲದ ಸಂದರ್ಭದಲ್ಲೂ ಬಿತ್ತನೆ ಬೀಜ, ಗೊಬ್ಬರ, ವಿದ್ಯುತ್ ದರ ಏರಿಕೆ, ಕೃಷಿಯ ಎಲ್ಲ ಸಾಮಗ್ರಿಗಳ ದರ ಏರಿಕೆ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್‌ಗೆ ರಾಜ್ಯದ ಜನತೆ ಸೋಲಿನ ಭಾಗ್ಯ ಉಣಿಸಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.