ಬಿಜೆಪಿಗೆ ಹೊಸ ಸದಸ್ಯರ ನೋಂದಣಿಗೆ ಕಾರ್ಯಕರ್ತರು ಶ್ರಮಿಸಿ-ಬಿ.ಸಿ. ಪಾಟೀಲಹಿರೇಕೆರೂರ ವಿಧಾನಸಭಾ ಕ್ಷೇತ್ರದಲ್ಲಿ ಹೊಸ ಬಿಜೆಪಿ ಸದಸ್ಯರನ್ನು ನೋಂದಣಿ ಮಾಡಿಸಲು ಪಕ್ಷ ೬೦,೦೦೦ ಗುರಿಯನ್ನು ಕೊಟ್ಟಿದೆ. ಆದ್ದರಿಂದ ಎಲ್ಲ ಪ್ರಮುಖ ಕಾರ್ಯಕರ್ತರು ತಮ್ಮ ಗ್ರಾಮಗಳಿಗೆ ತೆರಳಿ ಮನೆ ಮನೆ ಸಂಪರ್ಕ ಮಾಡಿ ಬಿಜೆಪಿಗೆ ಹೊಸ ಸದಸ್ಯರನ್ನು ಮಾಡಿಸಬೇಕು ಎಂದು ಕಾರ್ಯಕರ್ತರಿಗೆ ಮಾಜಿ ಸಚಿವ ಬಿ.ಸಿ. ಪಾಟೀಲ್ ಕರೆ ನೀಡಿದರು.