ಲೋಕಸಭೆ ಚುನಾವಣೆಯಲ್ಲಾದ ತಪ್ಪು ತಿದ್ದಿಕೊಂಡು ಸಂಘಟನೆಗೆ ಶ್ರಮ-ಶಾಸಕ ಮಾನೆಹಾನಗಲ್ಲ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ೧೦ ಸಾವಿರ ಮತಗಳು ಲೋಕಸಭೆ ಚುನಾವಣೆಯಲ್ಲಿ ಕಡಿಮೆ ಬಿದ್ದಿದ್ದು, ಎಲ್ಲಿ ಎಡವಿದ್ದೇವೆ ಎನ್ನುವುದನ್ನು ಅರಿತು, ತಪ್ಪು ತಿದ್ದಿಕೊಂಡು ಬರುವ ಜಿಪಂ, ತಾಪಂ ಚುನಾವಣೆ ಹೊತ್ತಿಗೆ ಮತ್ತೆ ಪಕ್ಷದ ಶಕ್ತಿ, ಸಾಮರ್ಥ್ಯ ನಿರೂಪಿಸಲು ಮುಖಂಡರು, ಕಾರ್ಯಕರ್ತರ ಜೊತೆಗೂಡಿ ಶ್ರಮಿಸುವುದಾಗಿ ಶಾಸಕ ಶ್ರೀನಿವಾಸ ಮಾನೆ ಹೇಳಿದರು.