ಪಕ್ಷದ ಆಗುಹೋಗು ಬಗ್ಗೆ ಸಾರ್ವಜನಿಕ ಚರ್ಚೆ ಬೇಡ- ಜೋಶಿಯಾರು ಸೋಲೋಕೆ ಯಾರು ಕಾರಣ ಆ ಮೇಲೆ ನೋಡೋಣ. ಆದರೆ ಈಗ ಕಾಂಗ್ರೆಸ್ನಲ್ಲಿ ಹರಿಪ್ರಸಾದ್ ಸ್ಥಾನ ಏನಾಗಿದೆ? ಅವರ ಪರಿಸ್ಥಿತಿ ಏನಾಗಿದೆ? ಆಲ್ ಇಂಡಿಯಾ ಜನರಲ್ ಸೆಕ್ರೆಟರಿ ಆಗಿದ್ದ ಅವರು ಈಗೇನಾಗಿದ್ದಾರೆ? ಅವರ ಭಾಷೆ ನಾನು ಬಳಸಲ್ಲ, ಅವರು ಬಹಳ ಅಸಭ್ಯವಾದ ಭಾಷೆ ಬಳಸ್ತಾರೆ. ಮೋದಿಯವರನ್ನು ಬೈತೀರಿ, ನನ್ನನ್ನೂ ಬೈತೀರಿ, ಆದರೆ ನಮ್ಮನ್ನು ಬೈದ ಮಾತ್ರಕ್ಕೆ ನಿಮ್ಮನ್ನು ಸಿದ್ದರಾಮಯ್ಯ ಮಂತ್ರಿ ಮಾಡಲ್ಲ. ನೀವು ಈಗ ಎಂಎಲ್ಸಿ ಇರೋದೇ ದೊಡ್ಡದು. ನೀವು ಏನು ಬೈದರೂ ಮಂತ್ರಿ ಆಗಲ್ಲ, ನನ್ನ ಬೈಯೋದ್ರಿಂದ ನೀವು ಮಂತ್ರಿ ಆಗೋದಾದರೆ ಇನ್ನೂ ಜಾಸ್ತಿ ಬೈಯಿರಿ,