ಬಿಗ್ಬಾಸ್ ಹನುಮಂತಗೆ ಸವಣೂರಲ್ಲಿ ಅದ್ಧೂರಿ ಸ್ವಾಗತಬಿಗ್ ಬಾಸ್ ರಿಯಾಲಿಟಿ ಶೋ ವಿಜೇತ, ಗಾಯಕ ಹನುಮಂತ ಲಮಾಣಿ ಅವರಿಗೆ ಸವಣೂರು ಪಟ್ಟಣ ಹಾಗೂ ಸ್ವಗ್ರಾಮ ಚಿಲ್ಲೂರು ಬಡ್ನಿಯಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಬಿಗ್ಬಾಸ್ ಗೆದ್ದ ಬಳಿಕ ಮೊದಲ ಸಲ ಗುರುವಾರ ಸ್ವಗ್ರಾಮಕ್ಕೆ ಹನುಮಂತ ಆಗಮಿಸಿದರು. ಅಭಿಮಾನಿಗಳು ಅವರನ್ನು ಸಂಭ್ರಮದಿಂದ ಸ್ವಾಗತಿಸಿ, ಮೆರವಣಿಗೆ ನಡೆಸಿ ಕುಣಿದು, ಕುಪ್ಪಳಿಸಿದರು.