ಕನ್ನಡ ಭಾಷೆ ಉಳಿವಿಗೆ ಶ್ರಮಿಸುವುದು ಎಲ್ಲರ ಕರ್ತವ್ಯ-ಪ್ರೊ. ವೀರಯ್ಯಪಂಪ, ಪೊನ್ನ, ರನ್ನ, ಜನ್ನ, ಸರ್ವಜ್ಞ, ಕುಮಾರವ್ಯಾಸ ಸೇರಿದಂತೆ ಹಲವಾರು ಮಹಾನ ದಾರ್ಶನಿಕರು ಕನ್ನಡ ಭಾಷೆಯನ್ನು ಕಟ್ಟಿ ಬೆಳಸುವಲ್ಲಿ ಶ್ರಮವಹಿಸಿದ್ದಾರೆ. ಇವರೆಲ್ಲರ ವಾರಸುದಾರರಾಗಿ ನಾವೆಲ್ಲರೂ ಕನ್ನಡ ಭಾಷೆಯ ಉಳಿವಿಗಾಗಿ ಶ್ರಮಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ. ವೀರಯ್ಯ ಮ. ಗುರುಮಠ ಹೇಳಿದರು.