ನಗರವಾಸಿಗಳು ಭಾಷೆ, ಸಂಸ್ಕೃತಿ ಉಳಿಸಲು ಜಾಗೃತರಾಗಲಿ-ಜೀವರಾಜ ಛತ್ರದಅನ್ಯಭಾಷೆ ಆಕ್ರಮಣದ ವಿರುದ್ಧದ ಹೋರಾಟದಲ್ಲಿ ಒಂದು ಭಾಷೆ ತನ್ನ ಸ್ಥಾನ ಕಳೆದುಕೊಂಡಾಗ ಭವಿಷ್ಯದಲ್ಲಿ ಅದಕ್ಕೆ ಸಾವು ಖಚಿತ. ಕನ್ನಡ ಭಾಷೆಗೆ ನಗರಗಳಿಗೆ ಹೋಲಿಸಿದರೆ ಹಳ್ಳಿಗಳಲ್ಲಿ ಅಷ್ಟೊಂದು ಬೆದರಿಕೆ ಇಲ್ಲ, ಗ್ರಾಮೀಣ ಪ್ರದೇಶದ ನಿವಾಸಿಗಳಂತೆ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಸಂಪ್ರದಾಯಗಳ ಉಳಿಸಿಕೊಳ್ಳುವ ಕುರಿತು ನಗರದಲ್ಲಿರುವ ಕನ್ನಡಿಗರು ಜಾಗೃತರಾಗಬೇಕು ಎಂದು ಏಳನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಜೀವರಾಜ ಛತ್ರದ ತಿಳಿಸಿದರು.