ಇಂದು ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ, ಅಧಿಕಾರಿಗಳ ಜತೆ ಸಭೆಕಳೆದೊಂದು ವಾರದಿಂದ ಜಿಲ್ಲೆಗೆ ಅಟಕಾಯಿಸಿಕೊಂಡಿದ್ದ ಮಳೆ, ಹೊಳೆ ಎರಡರಲ್ಲಿ ಕಳೆದ ಭಾನುವಾರ ರಾತ್ರಿಯಿಂದ ಮಳೆ ರಭಸ ತುಸು ತಗ್ಗಿದೆ, ಆದರೆ, ಭೀಮಾ ನದಿಯ ಪ್ರವಾಹದಲ್ಲಿ ಇಳಿಕೆ ಇನ್ನೂ ಕಂಡಿಲ್ಲ, ನೆರೆ ಪರಿಸ್ಥಿತಿ ಅಫಜಲಪುರ, ಕಲಬುರಗಿ, ಚಿತ್ತಾಪುರ, ಜೇವರ್ಗಿ, ಶಹಾಬಾದ್, ಸೇಡಂ, ಚಿಂಚೋಳಿ, ಕಾಳಗಿ ಸೇರಿದಂತೆ ಜಿಲ್ಲಾದ್ಯಂತ ಯಥಾಸ್ಥಿತಿ ಮುಂದುವರಿದಿದೆ.