ದ್ರಾಕ್ಷಿ ರಕ್ಷಣೆಗೆ ಸೀರೆಯಿಂದ ಬೇಲಿರೈತ ತಾನು ಬೆಳೆದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಮುಳ್ಳು ಬೇಲಿ, ತಂತಿ ಬೇಲಿ ಹಾಗೂ ಕಲ್ಲುಗಳಿಂದ ಬೇಲಿ ಹಾಕುವುದು ಸಾಮಾನ್ಯ. ಆದರೆ ತಾಲೂಕಿನ ಕಾಚಾಪುರದ ನಾಗನಗೌಡ ಕಾಚಾಪುರ ಎನ್ನುವ ರೈತ ತಾನು ಬೆಳೆದ ಮೂರು ಎಕರೆ ದ್ರಾಕ್ಷಿ ಬೆಳೆಯನ್ನು ಪ್ರಾಣಿ, ಪಕ್ಷಿಗಳಿಂದ ರಕ್ಷಿಸಿಕೊಳಲು ಬಣ್ಣ-ಬಣ್ಣದ ಸೀರೆಗಳನ್ನು ಬಳಸಿ ರಕ್ಷಣಾ ಬೇಲಿ ನಿರ್ಮಿಸಿಕೊಂಡಿದ್ದಾನೆ.