ಬದುಕಿನಲ್ಲಿ ಸ್ವದೇಶಿಯತೆ ಅಳವಡಿಕೆ: ರಮಾದೇವಿ ಬಾಲಚಂದ್ರ ಕಳಗಿ ಕರೆಜೇಡ್ಲದಲ್ಲಿನ ಗೋಪಾಲಕೃಷ್ಣ ದೇವಕಿ ಪಶು ಸಂಗೋಪನ ಕೇಂದ್ರದಲ್ಲಿ ಎರಡನೇ ವರ್ಷದ ಗೋ ಅಪ್ಪುಗೆ ಕಾರ್ಯಕ್ರಮ ಜರುಗಿತು. ಶ್ರೀ ಸಂಸ್ಥಾನ ಗೋಕರ್ಣ, ಶ್ರೀರಾಮಚಂದ್ರಪುರ ಮಠ, ಮುಳ್ಳೇರಿಯಾ ಮಂಡಲ ಅಂತರ್ಗತ ಕೊಡಗು, ಸುಳ್ಯ, ಗುತ್ತಿಗಾರು ಹಾಗೂ ಈಶ್ವರ ಮಂಗಲ ವಲಯಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.