ನಗರಸಭೆ ಸಾಮಾನ್ಯ ಸಭೆಯಲ್ಲಿ ಪೌರಾಯುಕ್ತ ವಿರುದ್ಧ ಅಸಮಾಧಾನ ಸ್ಫೋಟ!ಮಡಿಕೇರಿಯಲ್ಲಿ ಗುರುವಾರ ನಡೆದ ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಅಸಮಧಾನ ಸ್ಫೋಟಗೊಂಡು, ಪೌರಾಯುಕ್ತರ ಮೇಲೆ ನೇರ ಆರೋಪಗಳ ಸುರಿಮಳೆಯೇ ಕೇಳಿ ಬಂತು. ಭಾವುಕರಾದ ಪೌರಾಯುಕ್ತ ವಿಜಯ್, ನನ್ನ ಕರ್ತವ್ಯದಲ್ಲಿ ನಾನು ತಪ್ಪು ಮಾಡಿದ್ದು ಸಾಬೀತಾದರೆ ನನಗೆ ಮರಣ ದಂಡನೆ ನೀಡಿ ಎಂದರು.