ಗುರು ಬಸವೇಶ್ವರ ದೇವಸ್ಥಾನ ವಾರ್ಷಿಕ ಪೂಜೆ ಸಂಪನ್ನಸೋಮವಾರಪೇಟೆ ಸಮೀಪದ ಗರಗಂದೂರು ಬಿ ಗ್ರಾಮದ ಶ್ರೀಗುರು ಬಸವೇಶ್ವರ ದೇವಳದ ವಾರ್ಷಿಕ ಮಹಾಪೂಜೆ ಇತ್ತೀಚೆಗೆ ನಡೆಯಿತು. ವಿವಿಧೆಡೆಗಳಿಂದ ಆಗಮಿಸಿದ ಭಕ್ತರ ಸಮ್ಮುಖದಲ್ಲಿ ಗಣಪತಿ ಹೋಮ, ಶ್ರೀ ದೇವರ ಮಹಾಪೂಜೆ, ಮಹಾಮಂಗಳಾರತಿ ಶ್ರದ್ಧಾ ಭಕ್ತಿಯಿಂದ ಜರುಗಿತು. ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.