ಶ್ರೀಗಂಧದ ಮರಗಳ ಕಳ್ಳತನ ತಡೆಗಟ್ಟಲು ಒತ್ತಾಯಜಿಲ್ಲೆಯಲ್ಲಿ ಶ್ರೀನಿವಾಸಪುರ, ಕೋಲಾರ ಸೇರಿದಂತೆ ವಿವಿಧೆಡೆ ಹೆಚ್ಚು ಶ್ರೀಗಂಧ ಬೆಳೆಯಲಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಶ್ರೀಗಂಧದ ಕಳ್ಳತನ ಸಂಬಂಧ ಎಂಟು ಪ್ರಕರಣಗಳು ದಾಖಲಾಗಿವೆ. ದಾಖಲಾಗದ ಹಲವಾರು ಪ್ರಕರಣಗಳೂ ಇವೆ. ಕಳ್ಳತನ ತಡೆಯಲು ಜಮೀನಿನಲ್ಲಿ ಸಿ.ಸಿ.ಟಿ.ವಿ, ತಡೆಗೋಡೆ, ಸೋಲಾರ್ ಫೆನ್ಸ್ ಹಾಕಿದ್ದರೂ ಶ್ರೀಗಂಧ ಕಳ್ಳರ ಅಟಾಟೋಪ ಮುಂದುವರಿದಿದೆ