ಸಮುದ್ರಪಾಲಾದ ಮಕ್ಕಳ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ ನೀಡಿಜಿಲ್ಲೆಯ ಮುಳಬಾಗಿಲು ತಾಲೂಕಿನ ಎಂ.ಕೊತ್ತೂರು ಮುರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಪ್ರವಾಸಕ್ಕಾಗಿ ಮುರಡೇಶ್ವರಕ್ಕೆ ತೆರಳಿದ್ದು, ಅಲ್ಲಿ ಶಿಕ್ಷಕರು, ಮೇಲ್ವಿಚಾರಕರ ಅಜಾಗರೂಕತೆಯಿಂದ 9ನೇ ತರಗತಿಯ 15 ವರ್ಷ ವಯಸ್ಸಿನ ಶ್ರಾವಂತಿ, ದೀಕ್ಷಾ, ಜೆ.ಲಾವಣ್ಯ ಹಾಗೂ ವಂದನಾ ಸಮುದ್ರದ ಪಾಲಾಗಿದ್ದು, ಈ ದುರ್ಘಟನೆಗೆ ನೇರವಾಗಿ ಶಾಲೆಯ ಪ್ರಾಂಶುಪಾಲರು ಹಾಗೂ ಮೇಲ್ವಿಚಾರಕರು ಹೊಣೆಯಾಗಿದ್ದಾರೆ.