ಕೆರೆ ನಿರ್ಮಾಣಕ್ಕೆ ಹದಿನೈದು ದಿನದಲ್ಲೇ ಭೂಮಿ ನೀಡಲು ಒಪ್ಪಿಗೆ ಪತ್ರ ನೀಡಿ: ರಾಯರಡ್ಡಿಕುಕನೂರು ತಾಲೂಕಿನ ಮಂಗಳೂರು, ಶಿರೂರು, ಬಳಗೇರಿ ಹಾಗೂ ನಾನಾ ಗ್ರಾಮದಲ್ಲಿ ಕೃಷ್ಣ ಜಲ ಭಾಗ್ಯ ನಿಯಮಿತದಿಂದ ₹970 ಕೋಟಿ ವೆಚ್ಚದಲ್ಲಿ ನೂತನ ಕೆರೆ ನಿರ್ಮಾಣಕ್ಕೆ ರೈತರು ಭೂಮಿ ನೀಡಲು ಲಭ್ಯತೆ ಬಗ್ಗೆ ಸಭೆ ನಡೆಸಿ ಚರ್ಚಿಸಲಾಯಿತು.