ಹರಿದಾಸ ಪರಂಪರೆಗೆ ಗೋಪಾಲದಾಸರ ಕೊಡುಗೆ ಅನನ್ಯ: ನ್ಯಾಯವಾದಿ ಪ್ರಭಾಕರ ರಾವ್ಭೋಗಾಪುರೇಶಗೆ ಅಭಿಷೇಕ, ಪುಷ್ಪಾರ್ಚನೆ, ತುಳಸಿ ಅರ್ಚನೆ, ನೈವೇದ್ಯ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಕನಕಗಿರಿಯ ರಾಘವೇಂದ್ರಸ್ವಾಮಿ ಭಜನಾ ಮಂಡಳಿಯವರು ಹಾಗೂ ಭಕ್ತರಿಂದ ದೇಗುಲದ ಪ್ರಾಂಗಣದಲ್ಲಿ ಭಜನೆಯೊಂದಿಗೆ ಗೋಪಾಲದಾಸರ ಭಾವಚಿತ್ರ ಮೆರವಣಿಗೆ ನಡೆಯಿತು. ನೆರೆದಿದ್ದ ಭಕ್ತರು, ಮಹಿಳೆಯರು ಭಜನಾ ಹಾಡುಗಳಿಗೆ ಕುಣಿದು ಸಂತಸಪಟ್ಟರು.