ಕಾಡಿದ ಕೋವಿಡ್- ಪ್ರಾಣದ ಹಂಗು ತೊರೆದು ಕೋವಿಡ್ ವಿರುದ್ಧ ಹೋರಾಡಿದ್ದ ವಾರಿಯರ್ಸ್ನರ್ಸ್ಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ವೈದ್ಯರು ಆಸ್ಪತ್ರೆಯಲ್ಲಿ ತಮ್ಮ ಜೀವ ಪಣಕ್ಕೆ ಇಟ್ಟು ಸೇವೆ ಮಾಡುತ್ತಿದ್ದರು. ರೋಗಿಗಳ ಜೊತೆಯಲ್ಲಿ ಮನೆಯವರೇ ಬಾರದಿದ್ದಾಗ ಅವರನ್ನು ದಾಖಲಿಸಿಕೊಂಡು, ಆಸ್ಪತ್ರೆಯಲ್ಲಿ ಅವರಿಗೆ ಉಪಚರಿಸಿ, ಆರೈಕೆ ಮಾಡಿ ರೋಗಿಗಳ ಪಾಲಿನ ದೇವರಾಗಿದ್ದರು.