ಹೊಸ್ತಿಲ ಹುಣ್ಣಿಮೆ: ಹುಲಿಗೆಮ್ಮ ದರ್ಶನಕ್ಕೆ ಐದು ಲಕ್ಷ ಭಕ್ತರು!ಮುಂಜಾನೆಯಿಂದಲೇ ಭಾರೀ ಟ್ರಾಫಿಕ್ ಜಾಮ್ ಆಗಿತ್ತು. ಎಲ್ಲಿ ನೋಡಿದರೂ ವಾಹನ, ಜನರ ಸಾಲು ಕಂಡು ಬರುತ್ತಿತ್ತು. ಪೊಲೀಸರು, ದೇವಾಲಯದ ಆಡಳಿತ ವ್ಯವಸ್ಥೆ, ಸ್ವಯಂಸೇವಕರು ಜನರು, ವಾಹನ ನಿಯಂತ್ರಿಸಲು ಪರದಾಡಿದರು. 2-3 ಕಿಮೀ ಟ್ರಾಫಿಕ್ ಜಾಮ್ ಆಗುತ್ತಿತ್ತು. ಅದರಲ್ಲೂ ರೈಲ್ವೆ ಗೇಟ್ ಪದೇ ಪದೇ ಹಾಕುವುದರಿಂದ ಭಕ್ತರು ತೊಂದರೆ ಅನುಭವಿಸಿದರು.