ಸದೃಢ ಭಾರತಕ್ಕಾಗಿ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯಜೀವನದಲ್ಲಿ ಸಾಧನೆ ಮಾಡಲು ಅದೃಷ್ಟ ಹಾಗೂ ಅವಕಾಶಕ್ಕಾಗಿ ಕಾಯಬಾರದು. ನಮ್ಮಲ್ಲಿ ಅಗಾಧವಾದ ಶಕ್ತಿ ಇದೆ, ಶ್ರಮ, ಏಕಾಗ್ರತೆ, ಅಚಲ ನಂಬಿಕೆ, ಶ್ರದ್ಧೆ ಈ ಎಲ್ಲವನ್ನು ಬಳಸಿಕೊಂಡು ಜೀವನದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಹೆತ್ತ ತಂದೆ ತಾಯಿ, ಕಲಿಸಿದ ಶಿಕ್ಷಕರಿಗೆ, ಗ್ರಾಮಕ್ಕೆ ಒಳ್ಳೆಯ ಹೆಸರನ್ನು ತಂದು ಕೊಡುವ ಕೆಲಸ ಮಾಡಬೇಕು.