ಪುನೀತ ಪುಣ್ಯಸ್ಮರಣೆ ನಿಮಿತ್ತ ಕಣ್ಣಿನ ಶಸ್ತ್ರಚಿಕಿತ್ಸೆಕುಷ್ಟಗಿ ಪಟ್ಟಣದ ಕಾಖಂಡಕಿ ಕಣ್ಣಿನ ಆಸ್ಪತ್ರೆಯಲ್ಲಿ ಇನ್ನರ್ ವೀಲ್ ಕ್ಲಬ್ ವತಿಯಿಂದ ಡಾ. ಪುನೀತರಾಜಕುಮಾರ ಪುಣ್ಯಸ್ಮರಣೆಯ ಅಂಗವಾಗಿ ಡಾ.ಸುಶೀಲ ಕಾಖಂಡಕಿ ಇಬ್ಬರು ಆಟೋ ಚಾಲಕರು ಹಾಗೂ 5 ಜನ ಹಿರಿಯ ವೃದ್ಧರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿದರು.ಈ ಸಂದರ್ಭದಲ್ಲಿ ಕ್ಲಬ್ ಅಧ್ಯಕ್ಷೆ ಶಾರದಾ ಶೆಟ್ಟರ್, ಕಾರ್ಯದರ್ಶಿ ವಂದನಾ ಗೋಗಿ, ಡಿಸ್ಟ್ರಿಕ್ಟ್ ಎಡಿಟರ್ ಡಾ. ಪಾರ್ವತಿ ಪಲೋಟಿ, ಸುದೀಪ್ತಾ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸುದೀಪ್ತಾ ಕಾಖಂಡಕಿ, ಪ್ರಭಾವತಿ ಬಂಗಾರಶೆಟ್ಟರ್, ಶಶಿಕಲಾ ಕುಡತನಿ, ರಾಜೇಶ್ವರಿ, ಮಮತಾ, ಗಿರಿಜಾ ನಾಗೋಡ, ಗಿರಿಜಾ ಮಾಲಿ ಪಾಟೀಲ್, ಗಿರಿಜಾ ಚಿನಿವಾಲ್, ಶಿಲ್ಪಾ ಸುಂಕದ,ಪ್ರೇಮಾ, ಸುವರ್ಣ ಬಳೂಟಗಿ, ಬನಶಂಶಂಕರಿ, ಖಜಾಂಚಿ ಗೌರಮ್ಮ ಕುಡತನಿ ಇತರರು ಇದ್ದರು.