ಭತ್ತದ ಬೆಳೆ ನಿರೀಕ್ಷೆಯೊಂದಿಗೆ ಮತ್ತೊಂದು ದೀಪಾವಳಿಮಳೆ ಕೊರತೆಯಿಂದ ಎಲ್ಲವೂ ದುಬಾರಿಯಾಗಿದ್ದರೂ ದೀಪಾವಳಿಯ ಅದ್ಧೂರಿತನಕ್ಕೇನೂ ಕಡಿಮೆಯಾಗಿಲ್ಲದ್ದೂ ಭಾನುವಾರ ಮಾರುಕಟ್ಟೆಯಲ್ಲಿನ ಅಬ್ಬರ, ಗಲಾಟೆ, ಕೊಡುಕೊಳ್ಳುವಿಕೆಯನ್ನೂ ನೋಡಿದರೆ ಅರ್ಥವಾಗುತ್ತದೆ. ಸಮೂಹ ಬೆಳಕಿನ ಹಬ್ಬ ದೀಪಾವಳಿಗೆ ಮೆರುಗು ಹೆಚ್ಚಿಸುವ ಹೂವು, ಹಣ್ಣು, ಹಣತೆ ಸೇರಿದಂತೆ ಆಲಂಕಾರಿಕ ವಸ್ತುಗಳ ಖರೀದಿಗೆ ಜನ ಪಟ್ಟಣದ ಮಳಿಗೆಗಳು ಹಾಗೂ ಮಾರುಕಟ್ಟೆಗಳಲ್ಲಿ ಮುಗಿಬಿದ್ದಿದ್ದರು.