ಇಂದಿನಿಂದ ಹನುಮಂತನಗರ ಆತ್ಮಲಿಂಗೇಶ್ವರ ದೇಗುಲದಲ್ಲಿ ಭಾರೀ ದನಗಳ ಜಾತ್ರೆಮಹಾ ಶಿವರಾತ್ರಿ ಅಂಗವಾಗಿ ಹನುಮಂತನಗರದ ಶ್ರೀಆತ್ಮಲಿಂಗೇಶ್ವರ ದೇವಸ್ಥಾನದಲ್ಲಿ ಫೆ.24ರಿಂದ ಆರಂಭವಾಗಲಿರುವ ಭಾರೀ ದನಗಳ ಜಾತ್ರೆ ಮತ್ತು ವೈಭವದ ರಥೋತ್ಸವಕ್ಕೆ ಸಕಲ ಸಿದ್ಧತೆಗಳು ಮುಗಿದಿವೆ. ದನಗಳ ಜಾತ್ರೆಗೆ ಚಾಲನೆ ನೀಡಲಾಗಿತ್ತು. ಫೆ.24ರ ಬೆಳಗ್ಗೆ ಧ್ವಜಾರೋಹಣ, ಮಧ್ಯಾಹ್ನ ಮಹಾ ಮಂಗಳಾರತಿ, ಸಂಜೆ ಪಂಚಗವ್ಯ, ಪುಣ್ಯಾಹವಾಚನ ಗಣಪತಿ ಹೋಮ, ರಾತ್ರಿ 8 ಗಂಟೆ ಮಹಾ ಮಂಗಳರಾತಿ ನಡೆಯಲಿದೆ.