ಈಶ್ವರೀಯ ವಿಶ್ವವಿದ್ಯಾಲಯ: ಜನರನ್ನು ಆಕರ್ಷಿಸಿದ ಅಮರನಾಥ ಶಿವಲಿಂಗಪ್ರತಿ ವರ್ಷ ಮಹಾಶಿವರಾತ್ರಿ ಹಬ್ಬಕ್ಕೆ ಏನಾದರೊಂದು ವೈಶಿಷ್ಟ್ಯತೆಯನ್ನು ಮಂಡ್ಯ ಜನರಿಗೆ ಪರಿಚಯಿಸುವುದನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಅದರಂತೆ ಈ ಬಾರಿ ಅಮರನಾಥ ಶಿವಲಿಂಗ, ಹನ್ನೆರಡು ಜ್ಯೋತಿರ್ ಲಿಂಗ, ಸಹಸ್ರ ಶಿವಲಿಂಗ, ಚೈತನ್ಯದೇವಿಯರು, ಮಾತನಾಡುವ ಕುಂಭಕರ್ಣ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ.