ಮೂರು ತಿಂಗಳಾದರೂ ನಿರ್ಮಾಣವಾಗದ 200ಮೀ. ರಸ್ತೆ..!ಕಲ್ಲು, ಧೂಳಿನ ನಡುವೆ ವಾಹನಗಳ ನಿತ್ಯ ಸಂಚಾರ, ರಸ್ತೆಯ ಒಂದು ಭಾಗದಲ್ಲಿ ಸಣ್ಣ ಸಣ್ಣ ಗುಂಡಿಗಳು ನಿರ್ಮಾಣಗೊಂಡು ದ್ವಿಚಕ್ರವಾಹನ ಸವಾರರ ಸಂಚಾರಕ್ಕೆ ಸವಾಲು, ಜಲ್ಲಿ-ಕಲ್ಲು, ಮರಳು ದಾಸ್ತಾನು ಕೇಂದ್ರವಾದ ಬನ್ನೂರು ರಸ್ತೆ, ಅಡ್ಡಾದಿಡ್ಡಿಯಾಗಿ ಬಿದ್ದಿರುವ ಬ್ಯಾರಿಕೇಡ್‌ಗಳು, ಹಣವಿದ್ದರೂ ರಸ್ತೆ ಕಾಮಗಾರಿ ನಡೆಸದ ಗುತ್ತಿಗೆದಾರ. ಕಣ್ಣಿದ್ದೂ ಕುರುಡಾಗಿರುವ ನಗರಸಭೆ.