ಸೊಸೈಟಿ ಚುನಾವಣೆ: ಸಚಿವರು ಎಷ್ಟೇ ಭದ್ರತೆ ಹಾಕಿಸಿದ್ದರೂ ಗೆಲುವಿಗೆ ತೊಂದರೆಯಾಗಲಿಲ್ಲ: ಎಚ್.ಟಿ.ಮಂಜುಕ್ಷೇತ್ರದ ಶಾಸಕನಾಗಿ ನಾನು ಯಾವುದೇ ಸಹಕಾರ ಸಂಘಗಳಿಗೂ ಚುನಾವಣೆ ವೇಳೆ ಡಿ.ಆರ್ ವ್ಯಾನ್ ಹಾಕಿಸಲಿಲ್ಲ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರು ಎನ್.ಚಲುವರಾಯಸ್ವಾಮಿ ನನ್ನ ಸ್ವಗ್ರಾಮ ಹರಳಹಳ್ಳಿಯ ಸೊಸೈಟಿ ಚುನಾವಣೆಗೆ 3 ಡಿ.ಆರ್. ವ್ಯಾನ್ ಪೊಲೀಸ್ ಪಡೆ, ಇಬ್ಬರು ಪೊಲೀಸ್ ನಿರೀಕ್ಷಕರನ್ನು ಹಾಕಿಸಿದ್ದರು. ಆದರೂ ನಮ್ಮವರ ಗೆಲುವಿಗೆ ತೊಂದರೆಯಾಗಲಿಲ್ಲ.