ಪೋಷಕರು ಮತ್ತು ಶಿಕ್ಷಕರು ತಮ್ಮ ಪ್ರತಿಷ್ಠೆಗೋಸ್ಕರ ಮಕ್ಕಳ ಮೇಲೆ ನಿರಂತರ ಹೊರೆ: ಸಮ್ಮೇಳನ ಸರ್ವಾಧ್ಯಕ್ಷೆ ಕು.ಕೆ.ಎಂ.ಅಪೇಕ್ಷಸಾಹಿತ್ಯಕ್ಕೆ ಹೆಚ್ಚು ಒಲವು ನೀಡಿದರೆ ನಮ್ಮ ಭಾಷೆಯನ್ನು ಉನ್ನತೀಕರಿಸಲು ಸಾಧ್ಯವಾಗುತ್ತದೆ. ಯಾವ ವ್ಯಕ್ತಿ ಕಲೆ, ಸಾಹಿತ್ಯ, ಸಾಂಸ್ಕೃತಿಕವಾಗಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೋ ಅಂತಹ ವ್ಯಕ್ತಿ ಉತ್ತಮ ಸಮಾಜ ನಿರ್ಮಿಸುತ್ತಾನೆ. ಮಕ್ಕಳ ಜನಪದ ಗೀತೆ, ಸಣ್ಣ ಕಥೆ, ಕಾದಂಬರಿ, ನಾಟಕ ಮುಂತಾದವುಗಳು ಬೆಳೆಯಲು ಮಕ್ಕಳ ಸಾಹಿತ್ಯ ಸಮ್ಮೇಳನಗಳು ಅವಕಾಶ ಕೊಡುತ್ತವೆ. ಅಂತಹ ಕಾರ್ಯಕ್ಕೆ ಇಂದಿನ ಎಳೆಯ ಮಕ್ಕಳನ್ನು ಸಿದ್ಧಗೊಳಿಸುವ ಕೆಲಸವನ್ನು ಶ್ರೀಮಠ ಮಾಡುತ್ತಿದೆ. ಜಾನಪದ ಪರಂಪರೆಯಲ್ಲಿ ಮಕ್ಕಳ ಸಾಹಿತ್ಯದ ಬೇರನ್ನು ಕಾಣಬಹುದು ಎಂದು ತಿಳಿಸಿದರು.