ಹಾಲನ್ನು ಹುತ್ತಕ್ಕೆ ಎರೆಯುವ ಬದಲು ಮಕ್ಕಳಿಗೆ ನೀಡಿ: ನಂದಿನಿ ಜಯರಾಮು ಸಲಹೆಭಾರತದಲ್ಲಿ ಮೌಢ್ಯ ಮತ್ತು ಬಡತನವನ್ನು ಪರಸ್ಪರ ತಳಕು ಹಾಕಿಕೊಂಡಿವೆ. ನಮ್ಮಲ್ಲಿನ ಮೂಢನಂಬಿಕೆಗಳನ್ನು ತೊರೆದರೆ ನಮ್ಮ ಬದುಕು ಸ್ವರ್ಗವಾಗಲಿದೆ. ಅಮೃತಕ್ಕೆ ಸಮಾನವಾದ ಹಾಲನ್ನು ದೇವರು- ಧರ್ಮದ ಹೆಸರಲ್ಲಿ ಹಾಳುಗೆಡುವುದು ಶ್ರೇಷ್ಠವಲ್ಲ. ಹಾಲನ್ನು ಮಕ್ಕಳು, ಬಡವರು, ರೋಗಿಗಳು ಹಾಗೂ ವೃದ್ಧರಿಗೆ ನೀಡಿದರೆ ನಿಜವಾಗಿಯೂ ದೇವರು ಸಂತೃಪ್ತಿಯಾಗುತ್ತಾನೆ.